ದೃಶ್ಯ ಮಾಧ್ಯಮಗಳ ಪರಭಾಷೆಯ ಪ್ರೇಮವೂ,
ಗೆಳೆಯರೇ,
ಕೆಲವು ದಿನಗಳಿಂದ ದೃಶ್ಯ ಮಾಧ್ಯಮಗಳನ್ನು ನೋಡಿತ್ತಿದ್ದರೆ ನಿಮಗೆ ತಿಳಿಯಬಹುದು. ಸಮಯ ವಾಹಿನಿಯು ಎಲ್ಲೋ ಒಂದು ಕಡೆ ಪರಬಾಷೆಯ ಮೋಹ ಹೆಚ್ಚಾಗುತ್ತಿರುವಂತೆ ಕಾಣುತ್ತಿದೆ.
ಶ್ರೀ ಜಿ. ಎನ್. ಮೋಹನ್ ರವರು ಪ್ರಧಾನ ಸಂಪಾದಕರಾದ ನಂತರ
ತಮಿಳು, ತೆಲುಗು ಭಾಷೆಗಳ ಚಿತ್ರಗಳ ಬಗ್ಗೆ ಅತಿಯಾದ ವೈಭವೀಕರಣ ಹೆಚ್ಚಾಗುತ್ತಿದೆ. ನಿನ್ನೆಯ ಉದಾಹರಣೆ : ತಮಿಳಿನ ಸೂರ್ಯ ನಟಿಸಿದ 7 ನಂತ್ ಸೆನ್ಸ್ ಹಾಗೂ ವಿಜಯ್ ಅಭಿನಯದ ವೇಲಾಯುಧ ಚಿತ್ರಗಳ ಬಗ್ಗೆ ಅರ್ಧ ಗಂಟೆ ವಿಶೇಷ ಕಾರ್ಯಕ್ರಮವನ್ನು ಮಾಡುತ್ತಾರೆ. ಇದರ ಜೊತೆಗೆ ಚಿತ್ರ ಬಿಡುಗಡೆಯಾದ ಬೆಂಗಳೂರಿನ ಚಿತ್ರಮಂದಿರಗಳ ಮುಂದೆ ಕ್ಯಾಮರಾ ಹಿಡಿದು ವೀಕ್ಷಕರ ಅಭಿಪ್ರಾಯಗಳನ್ನೂ ಕೇಳಿಯೂ ಆಯಿತು. ನಾವು ಕರ್ನಾಟಕದಲ್ಲಿದ್ದೇವೆಯೋ ಅಥವಾ ತಮಿಳು ನಾಡಿನಲ್ಲಿದ್ದೇವೆಯೋ ಅನುಮಾನವಾಗುತ್ತಿದೆ. ಒಂದು ಸಮಧಾನ ವಿಷಯವೇನೆಂದರೆ ನಮ್ಮ ವರದಿಗಾರರು ತಮಿಳಿನಲ್ಲಿ ವೀಕ್ಷಕರನ್ನು ಮಾತನಾಡಿಸಿಲ್ಲ ಅನ್ನೋ ದು.
(ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ತಮಿಳಿನಲ್ಲಿಯೇ ವರದಿಮಾಡಿದರೂ ಆಶ್ಚರ್ಯವಿಲ್ಲ)
ಕಳೆದ ವಾರ ಇದೇ ಸಮಯ ವಾಹಿನಿಯಲ್ಲಿ ತಮಿಳು ನಟ ವಿಜಯ್ ಬೆಂಗಳೂರಿನ ಜ್ಯೂಯಲರ್ಸ್ ಉದ್ಘಾಟನೆ ಗಾಗಿ ಬಂದ ದಿನ ಅರ್ಧ ಘಂಟೆ ವಿಶೇಷ ಕಾರ್ಯಕ್ರಮವನ್ನು ಸಹ ಮಾಡಿಯಾಗಿತ್ತು.
ಕಳೆದ ತಿಂಗಳು ತೆಲುಗಿನ ಬದ್ರಿನಾಥ್ ಚಿತ್ರವೂ 50 ದಿನ ಪೂರ್ತಿ ಮಾಡಿದ ಸಂದರ್ಭದಲ್ಲಿ ನೇರಪ್ರಸಾರವನ್ನೂ ಸಹ ಮಾಡಿಯಾಗಿತ್ತು.
(ಇದರ ಬಗ್ಗೆ ನಮ್ಮ ಜಿ. ಎನ್. ಮೋಹನ್ ರವರಿಗೆ ಬರೆದು ತಿಳಿಸಿದ್ದೇನೆ. ನಿಮ್ಮ ಸಲಹೆಗೆ ಧನ್ಯವಾದಗಳು ಎಂಬ ಒಂದು ಉತ್ತರ)
ಆದರೆ ಯಾವುದೇ ಬದಲಾವಣೆಯಾಗಲಿಲ್ಲ.ಇನ್ನಷ್ಟು ಹೆಚ್ಚಾಯಿತು. ಯಾಕೆ ಹೀಗೆ ಅನ್ನೋದೇ ಅರ್ಥವಾಗುತ್ತಿಲ್ಲ.
ಬೇರೆ ಯಾವುದೇ ಭಾಷೆಯ ದೃಶ್ಯ ಮಾಧ್ಯಮಗಳಲ್ಲಿ ಕನ್ನಡದ ಚಿತ್ರಗಳ ಬಗ್ಗೆ ಪ್ರಸಾರ ಮಾಡಿದ ದಾಖಲೆಗಳು ಸಿಗುವುದಿಲ್ಲ.
ಈಗಾಗಲೇ ಬೆಂಗಳೂರು ಕರ್ನಾಟಕದಲ್ಲಿದೆಯೋ ಅಥವಾ ಇನ್ಯಾವುದೋ ರಾಜ್ಯದಲ್ಲಿದೆಯೋ ಅನ್ನೋ ಅನುಮಾನವಾಗಿದೆ.ಹಿಂದೆ ಕನ್ನಡ ಬಿಟ್ಟು, ಬೇರೆ ಭಾಷೆಗಳ ತುಣುಕುಗಳನ್ನು ಪ್ರಸಾರ ಮಾಡುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದರು ಆದರೆ ಈಗ ರಾಜಾ ರೋಷವಾಗಿ ಪರಭಾಷೆಗಳಿಗೆ ಮಾನ್ಯತೆ ಕೊಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ? ವಾಹಿನಿಗಳಲ್ಲಿ ಕನ್ನಡ ಕಾಗುಣಿತಗಳ ತಪ್ಪುಗಳು ನಿರಂತರವಾಗಿ ಆಗುತ್ತಿದೆ. ಅದನ್ನು ಸರಿ ಮಾಡಿಕೊಳ್ಳುವ ಗೋಜಿಗೇ ಹೋಗುತ್ತಿಲ್ಲ.
ನಮ್ಮ ಸುವರ್ಣ ವಾಹಿನಿಯೂ "ರಜನಿ ಜೋಕ್ಸ್" ಎಂಬ ಕಾರ್ಯಕ್ರಮ ದಿನವೂ ಪ್ರಸಾರ ಮಾಡುತ್ತಿದೆ. ಇದ್ಯಾಕೋ ತಿಳಿಯುತ್ತಿಲ್ಲ
ಕನ್ನಡ ಬಗ್ಗೆ ದನಿ ಎತ್ತುವ ನಮ್ಮ ಕನ್ನಡ ರಕ್ಷಣಾ ವೇದಿಕೆ, ಕನ್ನಡ ಚಳುವಳಿ ಹೋರಾಟಗಾರರು ಇದರ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಇಲ್ಲದಿದ್ದರೆ ಪರಭಾಷೆಯ ಮೋಹ ಹೆಚ್ಚಾಗುತ್ತಾ ಹೋಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ದಯವಿಟ್ಟು ಸಂಪಾದಕರು ಪರಭಾಷೆಯನ್ನು ಅತಿಯಾಗಿ ವಿಜೃಂಭಿಸುವುದು, ಅತಿಯಾದ ಪ್ರಚಾರ ಕೊಡುವುದನ್ನು ನಿಲ್ಲಿಸಿ.
ರಾಜು ವಿನಯ್ ದಾವಣಗೆರೆ
ನೀವು ಹೇಳುವುದು ಸರಿ
ReplyDelete